Surprise Me!

ಕಿಚ್ಚನಿಗಾಗಿ ಅಭಿಮಾನಿಗಳಿಂದ ಆಪ್ ಹಾಗು ವೆಬ್ ಸೈಟ್ | FIlmibeat Kannada

2017-11-27 1,223 Dailymotion

ಅಭಿಮಾನಿಗಳಿಂದ ಕಿಚ್ಚನಿಗಾಗಿ, ಕಿಚ್ಚನಿಗೋಸ್ಕರ ವೆಬ್ ಸೈಟ್ ಮತ್ತು ಆಪ್. ಅಭಿಮಾನಿಯ ಅಭಿಮಾನಿಯಾಗಿರುವ ಕಿಚ್ಚ ಸುದೀಪ್ ಗಾಗಿ ಅಭಿಮಾನಿಗಳು ಒಂದು ಮಹತ್ವದ ಕಾರ್ಯ ಮಾಡಿದ್ದಾರೆ. ಸದಾ ಅಭಿಮಾನಿಗಳಿಗಾಗಿ ಮತ್ತು ಅವರ ಕಷ್ಟಗಳಿಗೆ ಸ್ಪಂದಿಸುವ ಸುದೀಪ್, ಅಭಿಮಾನಿಗಳ ಕೆಲಸವನ್ನ ಮೆಚ್ಚಿಕೊಂಡಿದ್ದಾರೆ.ಕೇವಲ ಕನ್ನಡ ಸಿನಿಮಾರಂಗವಷ್ಟೇ ಅಲ್ಲದೆ ಬಾಲಿವುಡ್, ಟಾಲಿವುಡ್ ಹಾಗೂ ಹಾಲಿವುಡ್ ನಲ್ಲೂ ಸುದ್ದಿ ಮಾಡ್ತಿರೋ ಕಿಚ್ಚನ ಬಗ್ಗೆ ಸಂಪೂರ್ಣ ಮಾಹಿತಿ ನಿಮ್ಮ ಅಂಗೈನಲ್ಲೇ ಸಿಗಲಿದೆ. ಒಂದೇ ಕ್ಲಿಕ್ ನಲ್ಲಿ ಸುದೀಪ್ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಸಿಗಲಿದೆ. ಅಭಿಮಾನಿಗಳು ಕಿಚ್ಚ ಸುದೀಪ್ ಗಾಗಿ ಒಂದು ವೆಬ್ ಸೈಟ್ ಅನ್ನ ಮಾಡಿದ್ದಾರೆ. ಇಲ್ಲಿ ಸುದೀಪ್ ಬಗೆಗಿನ ಎಲ್ಲಾ ರೀತಿಯ ಮಾಹಿತಿಗಳು ಸಿಗಲಿದೆ. ksfaofficial.com ಹೆಸರಿನಲ್ಲಿ ವೆಬ್ ಸೈಟ್ ಅನ್ನ ಬೆಳಗಾವಿಯ ಅಭಿಮಾನಿಗಳು ಮಾಡಿದ್ದಾರೆ.ಸುದೀಪ್ ಅಭಿನಯಿಸಿರುವ ಸಿನಿಮಾಗಳು ಹಾಗೂ ಅಭಿನಯಿಸಲಿರುವ ಚಿತ್ರಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ವೆಬ್ ಸೈಟ್ ನಲ್ಲಿ ದೊರೆಯಲಿದೆ. ಅದರ ಜೊತೆಯಲ್ಲಿ ಕಿಚ್ಚ ಕ್ರಿಯೇಷನ್ಸ್ ನಲ್ಲಿ ನಿರ್ಮಾಣವಾಗಿರುವ ಸಿನಿಮಾಗಳ ಬಗ್ಗೆ ಡಿಟೇಲ್ಸ್ ಇಲ್ಲಿದೆ. <br />

Buy Now on CodeCanyon